Wednesday, November 25, 2009

ಆದಿವಾಸಿ

ಆದಿವಾಸಿಗಳನ್ನು ಸ್ವತಂತ್ರ ಭಾರತದಲ್ಲಿ ಅತ್ಯಂತ ಹೆಚ್ಚು ಶೋಷಣೆಗೊಳಗಾದ ವರ್ಗ ಎನ್ನಬಹುದು. ಅತ್ಯಂತ ಬಡತನದಲ್ಲಿ ಬದುಕುವ ಇವರಿಗೆ ಶಾಲೆಗಳು, ಆಸ್ಪತ್ರೆಗಳು, ರಸ್ತೆಳು ಹಾಗೂ ವಿದ್ಯುತ್ ನಂತಹ ಮೂಲಭೂತ ಸೌಕರ್ಯಗಳು ಕೂಡ ಲಭ್ಯವಾಗುವುದಿಲ್ಲ. ಇಂದಿನವರೆಗೆ ಬಂದ ಎಲ್ಲಾ ಎಲ್ಲಾ ಸರ್ಕಾರಗಳಿಗೆ ನೈಸರ್ಗಿಕ ಸಂಪನ್ಮೂಲಗಳಾದ ನದಿಗಳು, ಲೋಹಗಳು, ಕಾಡು ಹಾಗು ಭೂಮಿಗಳನ್ನು ಆಕ್ರಮಿಸಿಕೊಳ್ಳುವ ದುರುದ್ದೇಶಗಳಿದ್ದುದ್ದು ಸ್ಪಷ್ಟವಾಗಿದೆ. "ರಾಷ್ಟ್ರಿಯ ಅಭಿವೃದ್ದಿ"ಯ ಹೆಸರಿನಲ್ಲಿ ಕಟ್ಟಿಸಲಾಗುತ್ತಿರುವ ದೊಡ್ಡ ಅನೆಕಟ್ಟುಗಳು, ಗಣಿಕಾರಿಕೆ, ಔದ್ಯೋಗಿಕ ಅಭಿವೃದ್ದಿ ಹಾಗೂ ಮಾಹಿತಿ ತಂತ್ರಜ್ಞಾನ ಪಾರ್ಕುಗಳ ಕಾರಣದಿಂದಾಗಿ ಇಂದು ಭಾರತದ ಆದಿವಾಸಿಗಳು ಸ್ಥಳಾಂತರದ ಅಪಾಯದಲ್ಲಿ ಬದುಕುತ್ತಿದ್ದಾರೆ. ಈ 'ಅಭಿವೃದ್ದಿ'ಯಿಂದಾಗಿ ಅಂದರೆ ದೊಡ್ಡ ಔದ್ಯೋಗಿಕ ಸಂಸ್ಥೆಗಳ ಲಾಭ ಹೆಚ್ಚಿಸುವಂಥ ಅಭಿವೃದ್ದಿಯಿಂದಾಗಿ ಈಗಾಗಲೇ ಬಹಳಷ್ಟು ಆದಿವಾಸಿಗಳು ತಲೆಯ ಮೇಲಿನ ಸೂರನ್ನು ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಗೊಂಡ, ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ದಿ ಇಲಾಖೆ ತಯಾರಿಸಿದ 'ರಾಜ್ಯ ಕೃಷಿಕ ಸಂಬಂಧಗಳು ಹಾಗೂ ಇನ್ನೂ ಮುಗಿಯದ ಭೂ-ಸುಧಾರಣ ಕ್ರಮಗಳು' ಎಂಬ ವರದಿಯಲ್ಲಿ ಮಧ್ಯ ಭಾರತದಲ್ಲಿತಮ್ಮದೇ ಜಮೀನಿನಿಂದ ಹೊರದಬ್ಬಲ್ಪಡುತ್ತಿರುವ ಆದಿವಾಸಿಗಳು ಆ ಭಾಗಗಳಲ್ಲಿ ಶರವೇಗದಲ್ಲಿ ಹಚ್ಚುತ್ತಿರುವ ಮಾವೋವಾದಿಗಳ ಪ್ರಭಾವಗಳ ಬಗ್ಗೆ ಸ್ವಷ್ಟ ಉಲ್ಲೇಖವಿದೆ. ಹಾಗೂ ಛತ್ತೀಸಗಢದಲ್ಲಿ ಸಾಲ್ವಾಜುಡುಂಗೆ ಘೋಷನೆ ನೀಡುತ್ತಿರುವ ಸರ್ಕಾರದ ಧೋರಣೆಗಳನ್ನು ಜರಿಯಲಾಗಿದೆ. ಈ ವರದಿಯ ಪ್ರಕಾರ ಸಾಲ್ವಾಜುಡುಂಗೆ ಹಣಕಾಸಿನ ಸಹಾಯ ನೀಡುತ್ತಿರುವವರಲ್ಲಿ ಮೊದಲಿಗರು ಎಂದರೆ "ಟಾಟಾ" ಹಾಗೂ "ಎಸ್ಸಾರ್", ಹಾಗೂ ಈ ಎರಡೂ ಕಂಪನಿಗಳು ಖಾಲಿ ಜಮೀನನ್ನು ಸ್ವಾಧೀನಿಪಡಿಸಿ, ಗಣಿಗಾರಿಕೆಯ ಸ್ವಾಮಿತ್ವ ಗಳಿಸಲು ಹೆಣಗಾಡುತ್ತಿವೆ.

ಅಭಿವೃದ್ದಿಯ ಸಮಯದಲ್ಲಿ ಒಂದು ಯುದ್ದ

2008ರಲ್ಲಿ ಛತ್ತೀಸಗಢ, ಝಾರ್ಖಂಡ್, ಬಿಹಾರ್, ಆಂದ್ರಪ್ರದೇಶ್ ಒರಿಸ್ಸಾ ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಭಾರತ ಸರ್ಕಾರವು ಭಯಾನಕ ಸೈನಿಕ ಕಾರ್ಯಾಚರಣೆಗಳನ್ನು ಕೈಗೆತ್ತಿಕೊಂಡಿತ್ತು.ಇದೇ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ಮಧ್ಯ ಭಾರತದ ಭಾಗಗಳಲ್ಲಿ ಆದಿವಾಸಿಗಳು ಹಾಗೂ ಮಾವೋವಾದಿಗಳಿರುವ ಕಾಡುಗಳಲ್ಲಿ ಸರ್ಕಾರವು "ಆಪರೇಷನ್ ಗ್ರೀನ್ ಹಂಟ್" ಎಂಬ ಹೆಸರಿನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಸರ್ಕಾರ ಪ್ರಾಯೋಜಿತ ಸಾಲ್ವಾಜುಡುಂ (ಅಥವಾ ಶುದ್ದೀಕರಣ ಬೇಟೆ) ಹಾಗೂ ಅನ್ಯ ಪ್ಯಾರಾಮಿಲಿಟರಿ ಹಾಗೂ ಕೋಬ್ರಾದಂತಹ ವಿಶೇಷ ಪಡೆಗಳು ಸೇರಿ ಮಾವೋವಾದಿಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ನುಗ್ಗಿ ಅಲ್ಲಿನ ಭೂಮಿಯನ್ನು ನಿರ್ಮಲೀಕರಿಸಿ, ಔದ್ಯೋಗಿಕರಣಕ್ಕಾಗಿ ಆ ಪ್ರದೇಶವನ್ನು ಸ್ವಾಧೀನಗೊಳಿಸುವುದು ಹಾಗೂ ಆದಿವಾಸಿಗಳನ್ನು ಬಲವಂತವಾಗಿ ಸ್ಥಳಾಂತರಗೊಳಿಸಿ ಅವರ ಜೀವನಾಧಾರವನ್ನೇ ಕಸಿದುಕೊಳ್ಳುವ ಹೀನ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಮಾಧ್ಯಮಗಳಲ್ಲಿ ಭಾರತೀಯ ಸುರಕ್ಷಾ ಪಡೆಗಳು ಮಾವೋವಾದಿಗಳ ಜೊತೆ ಕೈಗೊಂಡ ಯುದ್ದಗಳ ಬಗ್ಗೆ ಪ್ರತಿದಿನ ಸುದ್ದಿಗಳು ಬರುತ್ತಾವಾದರು, ಅತ್ಯಂತ ಪ್ರಮುಖ ಸುದ್ದಿಗಳಿಗೆ ಧ್ವನಿಯೇ ಸಿಗುತ್ತಿಲ್ಲ.

ಭಾಗ 2


  • ಮೂರುವರೆ ಲಕ್ಷಕ್ಕಿಂತ ಹೆಚ್ಚಿನ ಆದಿವಾಸಿಗಳನ್ನು ಬಲವಂತವಾಗಿ ಹೊರ ಹಾಕಲಾಗಿದೆ. ದಾಂತೆವಾಡದ ಸುಮಾರು ಅರ್ಧದಷ್ಟು ಜನರಿಗೆ ತಲೆಯ ಮೇಲೆ ಸೂರೆ ಇಲ್ಲದಂತಾಗಿದೆ. ಅಲ್ಲಿಯ ಸ್ತ್ರೀಯರ ಮೇಲೆ ಬಲತ್ಕಾರಗಳಾಗುತ್ತಿದೆ. ಹೆಣ್ಣುಮಕ್ಕಳನ್ನು ಕೊಲ್ಲಲಾಗುತ್ತಿದೆ. ಯುವಕರನ್ನು ಅಂಗ ಹೀನರನ್ನಾಗಿ ಮಾಡಲಾಗುತ್ತಿದೆ.
  • ಕಾಡುಗಳಿಂದ ಈಡಿ ಹೋಗಲಾದ ಸುಮಾರು 5000 ಆದಿವಾಸಿಗಳನ್ನು ಒಟ್ಟಿಗೆ ಸೇರಿಸಿ, ಅವರನ್ನು ಸಾಲ್ವಾಜುಡುಂ ನಿರ್ವಹಿಸುತ್ತಿರುವ ನಿರಾಶ್ರಿತರ ಶಿಭಿರಗಳಲ್ಲಿ ಕೂಡಿಹಾಕಲಾಗಿದ್ದು, 640 ಗ್ರಾಮಗಳು ನಿರ್ಜನವಾಗಿವೆ.
  • ಒಂದು ಲಕ್ಷದಷ್ಟು ಆದಿವಾಸಿಗಳು ಆಂಧ್ರ ಮತ್ತು ಓರಿಸ್ಸಾಗಳಿಗೆ ವಲಸೆ ಹೋಗಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಜನರು ಛತ್ತೀಸಗಢದ ಕಾಡುಗಳಲ್ಲಿ ತಮ್ಮ ಜೀವವನ್ನುಳಿಸಿಕೊಳ್ಳಲು ಅಲ್ಲಲ್ಲಿ ಅಡಗಿ ಬದುಕುತ್ತಿದ್ದಾರೆ.
  • ಸ್ವತಂತ್ರ ವರದಿಗಳ ಪ್ರಕಾರ, ಈ ಆದಿವಾಸಿಗಳಿಗೆ ಆಹಾರ, ವಸತಿ, ನೀರು, ಆರೋಗ್ಯ ಹಾಗೂ ಶಿಕ್ಷಣದ ಸೌಲಭ್ಯಗಳೇ ಸಿಕ್ಕುತ್ತಿಲ್ಲ. ಸುರಕ್ಷಾ ಪಡೆಗಳು ಈ ಪ್ರದೇಶದಲ್ಲಿ ಅತ್ಯಂತ ಹೆಚ್ಚಿನ ಭಯ ಮತ್ತು ಶೋಷಣೆಯ ವಾತಾವರಣವನ್ನು ಕಲ್ಪಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಆದೇಶವಿದ್ದರೂ ಕೂಡ ರಾಜ್ಯ ಸರ್ಕಾರವು, ಆದಿವಾಸಿಗಳ ಪುನರ್ವಸತಿಯ ಕಾರ್ಯವನ್ನು ಕೈಗೊಳ್ಳುವಲ್ಲಿ ಸೋತಿದೆ.
  • ಸರ್ವೋಚ್ಚ ನ್ಯಾಯಾಲಯವು ಪರಿಹಾರ ಹಾಗೂ ಪುನರ್ವಸತಿ ಕ್ರಮಗಳ ಕಾರ್ಯಗತಗೊಳಿಸುವಿಕೆಯ ಬಗ್ಗೆ ಕೈಗೊಂಡ ಕಾರ್ಯದ ವರದಿಯನ್ನು (ಆಕ್ಷನ್ ಟೇಕನ್ ರಿಪೋರ್ಟ್) ನೀಡಬೇಕು ಹಾಗೂ ನ್ಯಾಯವೇದ್ಯ ಅಪರಾಧಗಳನ್ನು ಮಾಡಿದವರ ಮೇಲೆ ಎಫ್.ಐ.ಆರ್ ಗಳನ್ನು ದಾಖಲಿಸಬೇಕು ಎಂದು ಸರ್ಕಾರವು ತಾಕೀತು ಮಾಡಿದೆ.