ಪ್ರಿಯೆ ಏಕೆ ನನ್ನ ಕಾಡುವೆ ಪ್ರತಿದಿನ
ನಿನಗಾಗಿ ಕಾದಿರುವೆನು ಪ್ರತಿದಿನ
ಬಂದು ಹೋಗುವೆಯಾ ಒಂದು ದಿನ
ನಿನ್ನ ನೋಡಿ ಕಳೆದವು ಹಲವು ದಿನ
ಎಲ್ಲಿ ಹೋದರು ನಿನ್ನ ನೆನೆಪುಗಳೇ ಕಾಡುತ್ತಿದೆ ಚಿನ್ನಾ....
ಆ ಸಂಜೆ ನಿನಗೆ ನೆನಪಿದೆಯಾ ಚಿನ್ನಾ, ನನ್ನ ಜೊತೆ ನೀ ಕಡೇ ಬಾರಿ ಇದ್ದ ಕ್ಷಣ, ಮರೆಯದ ಆ ಮುಸ್ಸಂಜೆ. ಈ ನನ್ನ ಕಣ್ಣೊಳಗೆ ಕೆಂಪಾದ ಸೂರ್ಯ, ನನ್ನೆದೆಯೊಳಗೆ ಬಿಸಿಯಾದ ಆ ತಂಗಾಳಿಯನ್ನ ಮರೆಯೋಕಾಗತ್ತಾ ಹೇಳು.
ಕಡಲ ತೀರಕ್ಕೆ ಪ್ರತಿಸಲ ನಾನೇ ಕರೆದುಕೊಂಡು ಹೋಗುತ್ತಿದ್ದೆ. ಆದರೆ ಆ ದಿನ 'ಏನೋ ಮಾತಾಡ್ಬೇಕು ಕಣೋ'.......
ಅಂತ ನೀನೆ ಕರೆದುಕೊಂಡು ಹೋದೆ ನೋಡು, ಆಗಲೇ ನನ್ನಲ್ಲಿ ಅದಾವುದೋ ಒಂದು ಸಣ್ಣ ಭಯ ನನಗೇ ಗೊತ್ತಿಲ್ಲದೇ ಶುರುವಾಗಿತ್ತು. ಈ ಮನಸ್ಸು ಚಟಪಡಿಸ್ತಾ ಇತ್ತು. ಏಕೋ ಗೊತ್ತಿಲ್ಲ ಚಿನ್ನು, ನಿನ್ನ ಜೊತೆಗೆ ಆ ಮೂರು ದಿನಗಳಿಂದ ಮಾತಾಡ್ದೆ, ನೋಡದೆ ಇರದಿದ್ದರಿಂದಾನೋ ಏನೋ, ನಾನು ಮೌನಕ್ಕೆ ಶರಣಾಗಿದ್ದೆ. ಆದರೆ, ಗುಲಾಬಿಯಂತೆ ನಗು ತುಂಬಿ ಆದರಿಸುತ್ತಿದ್ದ ಆ ನಿನ್ನ ಕೆಂಪಾದ ತುಟಿಗಳಲ್ಲಿ ಅದೆಂಥದೋ ನಡುಕವಿತ್ತು. ಕೋಮಲದಂಥ ಆ ನಿನ್ನ ಕಣ್ಣುಗಳು ನನ್ನ ನೋಡಲು ಅಳಕುತ್ತಿದ್ದವು. ಮೌನದಿ ನಾ ನೋಡಿದಾಗ, ಒಂದೇ ಸಮನೆ ಉಸಿರು ಬಿಗಿದಪ್ಪಿ ದಯವಿಟ್ಟು ನನ್ನನ್ನು ಕ್ಷಮಿಸು, ನನ್ನನ್ನು ಮರೆತುಬಿಡು ಎಂದು, ಎರಡು ಕೈಗಳನ್ನ ಮುಚ್ಚಿಕೊಂಡು ದುಃಖಿಸಿ ಅಳುತ್ತಾ ಕುಳಿತು ಬಿಟ್ಟೆ ನೋಡು, ಆಗ ನನ್ನ ಜಿವಾನೇ ಹೋದಂತಾಯ್ತು. :(
ನೀನೆಂದೂ ನನ್ನ ನೋಡಬಾರದು, ನನ್ನ ಹಿಂದೆ ಬರಬಾರದು. ಹಾಗೇನಾದರು ಮಾಡಿದರೇ ನನ್ನಾಣೆ ಎಂದೇಳಿ ನನ್ನನ್ನು ಮಾತನಾಡಲೂ ಬಿಡದೇ, ನನ್ನೆಡೆಗೆ ಬೆನ್ನು ತೋರಿ ಎದ್ದು ನಡೆದು ಬಿಟ್ಟೆ. ಆ ಸಂಜೆಯಲಿ ನಿನ್ನೊಂದಿಗೆ ಕಳೆದು ಹೋದ ಆ ಸೂರ್ಯ ಮತ್ತೆಂದಿಗೂ ನನ್ನ ಬಾಳಲ್ಲಿ ಬೆಳಕಾಗಿ ಬಂದಿಲ್ಲ ಹಾಗೆ ಬರಲೆನ್ನುವ ಸಣ್ಣ ನಿರೀಕ್ಷೆಯು ಈಗ ನನ್ನಲ್ಲಿಲ್ಲ. :(
ಚೀನ್ನಾ ನಿನೇನೋ ಸುಲಭವಾಗಿ ಮರೆತುಬಿಡು ಅಂತ ಹೇಳಿಬಿಟ್ಟೇನೋ ಹೋದೆ ಕಣೋ. ಆದರೆ, ಮರೆಯುವುದು ಹೇಗೆ ಅಂತ ಮಾತ್ರ ಹೇಳಿ ಹೋಗಲಿಲ್ಲ ನೋಡು. ಅದಕ್ಕೇ ಅನ್ಸತ್ತೆ, ಇಂದಿಗೂ ನನ್ನಿಂದ ನಿನ್ನ ಮರೆಯೋದಕ್ಕೆ ಸಾಧ್ಯ ಆಗಿಲ್ಲ. ನಿನ್ನೊಂದಿಗಿನ ಆ ಮಧುರ ಕ್ಷಣಗಳು, ನಿನ್ನ ರೇಗಿಸಿ ಖುಷಿಪಡಿಸುತ್ತಿದ್ದ ಆ ದಿನಗಳು; ಕಣ್ಣಲ್ಲಿ ಕಣ್ಣಿಟ್ಟು ನೋಡಿ ಸುಖಿಸುತ್ತಿದ್ದ ಆ ಕ್ಷಣಗಳು ಮರೆಯಲು ಸಾಧ್ಯನಾ? ಚಿನ್ನಾ ನೆನಪಿದೆಯಾ ಆ ದಿನ ಅಳುತ್ತಾ 'ನನ್ನನ್ನು ಯಾವತ್ತಿಗೂ ಕೈ ಬಿಡೋಲ್ಲಂತ ಭಾಷೆ ಕೊಡು' ಎಂದೇಳಿ ಭಾಷೆ ತೆಗೆದುಕೊಂಡಿದ್ದ ನಿನ್ನಿಂದಲೇ ನನ್ನ ಮರೆಯಲು ಅದ್ಹೇಗೆ ಸಾಧ್ಯ?!
ನಿಜ ಹೇಳ್ಲಾ, ನೀನು ಹಪಹಪಿಗೆ ಬಿದ್ದು ಕೇಳಿದ ಅದೆಷ್ಟೋ ಮಾತುಗಳು, ನನ್ನೊಳಗೂ ಇದ್ದರು ಆದೆಕೋ ಬರೀ ಮೌನವಾಗಿಯೇ ಉಳಿದು ಬಿಟ್ಟೆವು. ಈಗೀಗ ಅನಿಸ್ತಿದೆ, ನೀನಿರದ ಈ ಬಾಳು ಬರಡು ಅಂತ. ನೀನಿಲ್ಲದ ಈ ಜಗವೆಲ್ಲ ಶೂನ್ಯವಾಗಿರುವಾಗ, ಒಳ ಹೋಗಿ ಬಂದ ಪ್ರತಿ ಉಸಿರು 'ನೀನೆಲ್ಲಿ'... ಎಂದು ಕೇಳುವಾಗ, ಅವುಗಳಿಗೆಲ್ಲ ಏನೆಂದು/ಏನಂತ ಉತ್ತರ ಕೊಡಲಿ ಹೇಳು ಚಿನ್ನು? ಒಮ್ಮೊಮ್ಮೆ ಈ ನಿರ್ಗತಿಕ ಮೌನವೂ ಕೂಡ ನನ್ನ ಬಡಿದೆಬ್ಬಿಸುತ್ತೆ, ಏನೆಲ್ಲಾ ಕೇಳು ಅನ್ನುತ್ತೆ. ಅವಳ್ಯಾಕೆ ಹಾಗೆ ಹೋದಳು ಹೇಳು, ಅನ್ನುತ್ತೆ. ಅದಕ್ಕೆ ನಿನ್ನುತ್ತರ ಏನೋ ಗೊತ್ತಿಲ್ಲ. ಆದರೆ ಕಡೇ ಬಾರಿ ನಿನಗೆ ಒಂದೇ ಒಂದು ಪ್ರಶ್ನೆ ಕೇಳ್ತೀನಿ, ಅದಕ್ಕೆ ಸರಿಯಾದ ಉತ್ತರ ಕೊಡ್ತಿಯಾ? 'ಯಾಕೋ, ಆ ಸಂಜೆ ಆರೀತಿ ಹೇಳಿಬಿಟ್ಟೆ?' ಅಂತ ಕೇಳಿದೊಡನೆ ಮತ್ತೆ ಕಣ್ಣು ತೋಯಿಸಿಕೊಂಡು ಮೌನಕ್ಕೆ ಹಿಂದಿರುಗದಿರು ಗೆಳತಿ. ಒಂದು ಸಣ್ಣ ಉತ್ತರ ಕೊಟ್ಟಿದ್ದರೂ ಸಾಕಾಗಿತ್ತು, ಇಂದು ಇಷ್ಟು ದೊಡ್ಡ ಕಂದಕದೊಳಗೆ ಬಿದ್ದು ಒದ್ದಾಡುವಂತೆ ಆಗುತ್ತಿರಲಿಲ್ಲ. ಆದರೆ ಆ ಉತ್ತರಾನಂತು ನೀನು ಕೊಡಲಿಲ್ಲ, ಅದು ನನ್ನೊಳಗೂ ಸಿಗಲಿಲ್ಲ. ಯಾವುದೋ ಒತ್ತಡಕ್ಕೆ ಸಿಲುಕಿ ನೀನು ಮಾಡಿದೆ ಅಂತ, ನನಗೆ ಗೊತ್ತು. ಯಾಕೆ ಅಂದ್ರೆ, ನಿನಗೂ ಸಹ ನಾನೆಂದ್ರೆ ಅಷ್ಟು ಪ್ರೀತಿ. ಒಂದಿಷ್ಟು ಗೌರವ, ಅದಕ್ಕಿಂತಲೂ ಮಿಗಿಲಾಗಿ ನನ್ನಲ್ಲಿ ಸಲುಗೆ ಕೂಡ ಇತ್ತು ನೋಡು, ಅದಕ್ಕೆ ನಾನ್ಹೇಳಿದ್ದು, ಕಣ್ಣು ತೋಯಿಸಿಕೊಂಡು ಮೌನಕ್ಕೆ ಹಿಂದಿರುಗಬೇಡ ಅಂತ.
ಚಿನ್ನಾ ಈಗ ಹೇಳು, ಮರೆಯದ ಆ ಮುಸ್ಸಂಜೆಯಲಿ ಮರೆಯಾಗಿ ಹೋದವಳು ನೀನು. ಹಾಗೇ ಕತ್ತಲೆಯ ಗೂಡಿನಲ್ಲಿ ಒಂಟಿಯಾಗಿ ನಿನಗಾಗಿ ಕಾದು ಕುಳಿತವನು ನಾನು. ನೀನು ಕೈ ಬಿಟ್ಟು ಹೋದ ಅದೇ ಕತ್ತಲೆಯ ಗೂಡಿಗೆ ಮತ್ತೆ ಒಂದು ಸಣ್ಣ ಮಿಣುಕು ಹುಳುವಿನ ಬೆಳಕಾಗಿಯಾದರು ನನ್ನ ಬಾಳಲ್ಲಿ ಬರ್ತಿಯಾ....? ಒಂಟಿ ಎನ್ನುವ ಕಲ್ಪನೆಯಲ್ಲಿ ಬಿಟ್ಟು ಹೋದೆ ನೀನೇ :(
ಜೊತೆಯಾಗಿ ಬರುವೆ ಎಂಬ ನಿರೀಕ್ಷೆಯಲ್ಲಿ.........